ಕಲ್ಯಾಣ ಕರ್ನಾಟಕ ಪ್ರಶಸ್ತಿಗೆ ಬಣಗಾರ ಸೇರಿ ಮೂರು ಜನರ ಆಯ್ಕೆ

ಸೇಡಂ: ಸೇಡಂನ ಬೊಮ್ನಳ್ಳಿ ಸುದ್ದಿ ಪ್ರತಿಷ್ಠಾನ ವತಿಯಿಂದ 2024 ನೇ ಸಾಲಿನ ಕಲ್ಯಾಣ ಕರ್ನಾಟಕ ಪತ್ರಕರ್ತ ಪ್ರಶಸ್ತಿಗೆ ಇಬ್ಬರು ಪತ್ರಕರ್ತರಾದ ಸುಭಾಷ್ ಬಣಗಾರ, ಯಾದಗಿರಿಯ ನಾಗಪ್ಪ ಮಾಲಿಪಾಟೀಲ್  ಹಾಗೂ ಶಿವ ಸಂಪದ ಪ್ರಶಸ್ತಿಗೆ ಶಿಕ್ಷಣ ತಜ್ಞ ಪ್ರೊ. ಚೆನ್ನಾರೆಡ್ಡಿ ಪಾಟೀಲ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಮಹಿಪಾಲ್ ರೆಡ್ಡಿ ಮುನ್ನೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಸರಾಂತ ಪತ್ರಕರ್ತ ದಿ. ವೀರಭದ್ರ ಮಾಮನಿ ಸ್ಮರಣಾರ್ಥ ಇಬ್ಬರು ಪತ್ರಕರ್ತರಿಗೆ ಹಾಗೂ Read more…

ಕಡೆಗೂ ಪೊಲೀಸ್ ಠಾಣೆಗೆ ಕೂಡಿಬಂತು ಕಾಲ

ಎಸಿ ಕಚೇರಿಗೆ ಠಾಣೆ ಸ್ಥಳಾಂತರ : ಹಲವು ವರ್ಷಗಳ ಮಳೆನೀರ ತೊಂದರೆಗೆ ಮುಕ್ತಿ ಸೇಡಂ: ಪ್ರತಿ ಮಳೆಗಾಲದಲ್ಲಿ ಮೊಳಕಾಲೆತ್ತರಕ್ಕೆ ನೀರು. ಸಾವಿರಾರು ಜನರ ಮೇಲಿನ ಎಫ್.ಐ.ಆರ್, ದೂರುಗಳು ನೀರಿನಲ್ಲಿ ಹೋಮ ಮಾಡಿದಂತಹ ಅನುಭವ. ಅವುಗಳನ್ನು ಹೇಗೊ ಕಾಪಾಡಿ, ಒಣಗಿಸಿ ಶೇಖರಿಸುವ ಪೊಲೀಸ್ ಸಿಬ್ಬಂದಿ. ಇನ್ನೊಂದೆಡೆ ಸಾರ್ವಜನಿಕರಿಗೆ ರಕ್ಷಣ ನೀಡುವವರೆ ನೀರಲ್ಲಿ ಮುಳುಗುವ ದಯನೀಯ ಸ್ಥಿತಿ.ಸುಮಾರು ೩೦ಕ್ಕೂ ಅಧಿಕ ವರ್ಷಗಳಿಂದ ಇಂತಹ ದುಸ್ಥಿತಿಯಲ್ಲಿದ್ದ ಸೇಡಂ ಪೊಲೀಸ್ ಠಾಣೆಗೆ ಕೊನೆಗೂ ಮುಕ್ತಿ ಸಿಕ್ಕಿದೆ. Read more…

ಶ್ರೀಸಿಮೆಂಟ್ ನಲ್ಲಿ ಮತ್ತೆ ಬಿತ್ತು ಹೆಣ : ನಿಲ್ಲದ ಕಾರ್ಮಿಕರ ಸಾವು

ಸೇಡಂ: ತಾಲೂಕಿನ ಕೋಡ್ಲಾ ಬೆನಕನಹಳ್ಳಿಯ ಶ್ರೀ ಸಿಮೆಂಟ್ ಕಾರ್ಖಾನೆಯಲ್ಲಿ ಮತ್ತೋರ್ವ ಕಾರ್ಮಿಕ ಸಾವನ್ನಪ್ಪಿದ್ದಾನೆ.ಬೆನಕನಹಳ್ಳಿ ಗ್ರಾಮದ ಇಂದ್ರಕುಮಾರ ದೇವಪ್ಪ (೩೨) ಮೃತ ವ್ಯಕ್ತಿಯಾಗಿದ್ದು, ಹೃದಯಾಘಾತದಿಂದ ಸಾವನ್ನಪ್ಪಿರುವುದಾಗಿ ಹೇಳಲಾಗಿದೆಯಾದರೂ, ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.ಕೇವಲ ಎರಡೇ ತಿಂಗಳಲ್ಲಿ ಇಬ್ಬರು ಕಾರ್ಮಿಕರು ಕಾರ್ಖಾನೆಯಲ್ಲಿ ಅಪಘಾತಕ್ಕೆ ಒಳಗಾಗಿ ಸಾವನ್ನಪ್ಪಿದ್ದರು. ಈಗ ಇಂದ್ರಕುಮಾರ ಮೃತಪಟ್ಟಿದ್ದು, ಯಾವ ಆಸ್ಪತ್ರೆಯ ವರದಿಗಳಿಲ್ಲದೆ ಸಿಮೆಂಟ್ ಕಾರ್ಖಾನೆಯ ಅಧಿಕಾರಿಗಳೇ ಹೃದಯಾಘಾತವಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ. ದಿನೆ ದಿನೆ ಕಾರ್ಖಾನೆಯಲ್ಲಿ ಸಾವು ನೋವುಗಳು ಉಲ್ಬಣಿಸುತ್ತಿದ್ದು, ಕಾರ್ಖಾನೆಯ Read more…

ಶ್ರೀಸಿಮೆಂಟನಲ್ಲಿ ಹೈಡ್ರಾಗೆ ಸಿಲುಕಿ ಕಾರ್ಮಿಕ ಸಾವು

ಸೇಡಂ: ಚಲಿಸುತ್ತಿದ್ದ ಹೈಡ್ರಾ ವಾಹನಕ್ಕೆ ಸಿಲುಕಿ ಕಾರ್ಮಿಕನೋರ್ವ ಸಾವನ್ನಪ್ಪಿರುವ ಘಟನೆ ತಾಲೂಕಿನ ಕೋಡ್ಲಾ ಬೆನಕನಹಳ್ಳಿಯ ಶ್ರೀಸಿಮೆಂಟ್ ಕಾರ್ಖಾನೆಯಲ್ಲಿ ಜರುಗಿದೆ. ಹೈಡ್ರಾ ವಾಹನ ಡಿಕ್ಕಿ ರಭಸಕ್ಕೆ ಕಾರ್ಮಿಕನ ದೇಹ ಛಿದ್ರವಾಗಿದ್ದು, ಮೃತನನ್ನು ವೆಸ್ಟ್ ಬೆಂಗಾಲ ಮೂಲದ‌ ಶೇಖ್ (42) ಎಂದು ಗುರುತಿಸಲಾಗಿದೆ. ಘಟನೆ ಹಿನ್ನೆಲೆಯಲ್ಲಿ ಶ್ರೀಸಿಮೆಂಟ್ ಕಾರ್ಖಾನೆ ಎದುರು ಕಾರ್ಮಿಕರು ಜಮಾಯಿಸಿದ್ದು, ಸೇಡಂ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ಈ ವ್ಯಕ್ತಿ ಕಂಡರೆ ಕೂಡಲೆ ತಿಳಿಸಿ : ಕಾಣೆ ಯಾಗಿದ್ದಾರೆ.

ಸೇಡಂ: ತಾಲೂಕಿನ ಬಟಗೇರಾ (ಕೆ) ನಿವಾಸಿ ಸುನೀಲ ನಾಗಪ್ಪ ತಳವಾರ (30) ಕಾಣೆಯಾಗಿದ್ದಾರೆ ಎಂದು ಸೇಡಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೆಲ‌ ದಿನಗಳ ಹಿಂದೆ ಬೈಲಿಗೆ ಹೋಗಿ ಬರುವುದಾಗಿ ತಿಳಿಸಿದ ಸುನೀಲ ಮತ್ತೆ ಹಿಂದಿರುಗಿ ಬಂದಿರುವುದಿಲ್ಲ. ಸದೃಢ ಮೈಕಟ್ಟು, ಸಾದಾ ಬಣ್ಣ, ಬಿಳಿ ಹೂವಿನ ಚಿತ್ರ ಅಂಗಿ ಧರಿಸಿದ್ದಾರೆ. ಯಾರಿಗಾದರೂ ಮಾಹಿತಿ ದೊರೆತಲ್ಲಿ ಸೇಡಂ ಪೊಲೀಸ್ ಠಾಣೆ ಸಂಖ್ಯೆ 08441276166 ಅಥವಾ ಪಿಎಸ್ಐ ಸಂಖ್ಯೆ 9480803593 ಗೆ ಸಂಪರ್ಕಿಸಲು Read more…

ವಿಶ್ವಜ್ಯೋತಿ ಶಾಲೆ ವಿದ್ಯಾರ್ಥಿ ನವೋದಯ ಶಾಲೆಗೆ ಆಯ್ಕೆ

ಸೇಡಂ: ಇಲ್ಲಿನ ಶ್ರೀ ಸಪ್ಪಣ್ಣಾರ್ಯ ಶಿವಯೋಗಿ ಶಿಕ್ಷಣ ಸಮಿತಿಯ ವಿಶ್ವಜ್ಯೋತಿ ವಿದ್ಯಾಮಂದಿರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆಯುತ್ತಿರುವ ನವೋದಯ ತರಬೇತಿ ಕೇಂದ್ರದ ವಿದ್ಯಾರ್ಥಿ ನವೋದಯ ಶಾಲೆಗೆ ಆಯ್ಕೆಯಾಗಿದ್ದಾನೆ ಎಂದು ಶಿಕ್ಷಣ ಸಮಿತಿಯ ಅಧ್ಯಕ್ಷ ವಿಜಯಕುಮಾರ ಸೂರವಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಶಾಲೆಯ ವಿದ್ಯಾರ್ಥಿ ಯಶ್ ಹುಸನಪ್ಪ ಕೇಂದ್ರದ ನವೋದಯ ಶಾಲೆಗೆ ಆಯ್ಕೆಯಾಗಿದ್ದು, ವಿದ್ಯಾರ್ಥಿಯ ಸಾಧನೆಗೆ ಶಿಕ್ಷಕರು, ಪಾಲಕರು ಹರ್ಷ ವ್ಯಕ್ತಪಡಿಸಿದ್ದಾರೆ.

ತಲವಾರ ಹಿಡಿದು ಬರ್ಥಡೆ ಆಚರಣೆ : ಮತ್ತೋರ್ವನ ಹವಾ ಇಳಿಸಿದ ಇಲಾಖೆ

ಸೇಡಂ: ತಲವಾರ ಹಿಡಿದು ಬರ್ಥಡೆ ಆಚರಿಸುವುದು. ನಕಲಿ ಪಿಸ್ತೂಲ ಹಿಡಿದು ಸಾರ್ವಜನಿಕರಲ್ಲಿ ಭಯ ಹುಟ್ಟಿಸುವುದು. ರೀಲ್ಸ್ ಮಾಡಿ ಶೋಕಿ ಮಾಡುವವರ ವಿರುದ್ಧ ಪೊಲೀಸ್ ಇಲಾಖೆ ಸಮರವೆ ಸಾರಿದಂತಿದೆ. ಎಸ್ಪಿ ಅಕ್ಷಯ ಹಾಕೆ ಬಂದಾಗಿನಿಂದ ಪುಂಡ ಪೋಕರಿಗಳು ಬಾಲ ಬಿಚ್ಚಿದರೆ ಕಂಬಿ ಎಣಿಸುವುದು ಗ್ಯಾರಂಟಿ ಎಂಬ ಮಾತುಗಳು ಕೇಳಿಬರುತ್ತಿವೆ. ಕೆಲ‌ ದಿನಗಳ ಹಿಂದಷ್ಟೆ ನಕಲಿ ಪಿಸ್ತೂಲ್ ಹಿಡಿದು ರೀಲ್ಸ್ ಮಾಡುವ ಮೂಲಕ ಸಮಾಜದಲ್ಲಿನ ಶಾಂತಿ ಸುವ್ಯವಸ್ಥೆಗೆ ಧಕ್ಕೆ ತಂದವರ ನೀರಿಳಿಸಿದ್ದ ಪೊಲೀಸರು Read more…

ಕನ್ನಡಪರ ಹೋರಾಟಗಾರ ವರದಸ್ವಾಮಿ ಹಿರೇಮಠ ಜನುಮ ದಿನ : ಮಠಗಳಿಗೆ ದುಬಾರಿ ಗಿಫ್ಟ್ ಕೊಟ್ಟು ಆಚರಣೆ

ಸೇಡಂ: ಅನೇಕರು ಜನುಮ ದಿನಗಳನ್ನು ಡಿಜೆ, ಮೌಂಸ, ಎಣ್ಣೆ ಪಾರ್ಟಿ ಮೂಲಕ ಆಚರಿಸುತ್ತಾರೆ, ಇನ್ನೂ ಕೆಲವರು ಕೇಕ್ ಕಟ್ ಮಾಡಿ, ಅನ್ನದಾನ, ಕಂಬಳಿ ದಾನ, ಬಟ್ಟೆ ದಾನ ಮಾಡಿ ಆಚರಿಸಿಕೊಳ್ಳುತ್ತಾರೆ. ಆದರೆ ಇಲ್ಲಿನ ಕನ್ನಡಪರ ಹೋರಾಟಗಾರ ವರದಸ್ವಾಮಿ ಹಿರೇಮಠ ಅವರು ಅತ್ಯಂತ ದುಬಾರಿ ಗಿಫ್ಟ್ ನ್ನು ಮಠಗಳಿಗೆ ನೀಡುವ ಮೂಲಕ ಆಚರಿಸಿಕೊಂಡಿದ್ದಾರೆ.   ಬಹುಶಃ ವಿಶ್ವದಲ್ಲಿ ದಾಹ ತಣಿಸುವ ಶಕ್ತಿ ಯಾವ ಹಣಕ್ಕೂ ಇಲ್ಲ ಎನ್ನಬಹುದು. ಬಾಯಾರಿಕೆಯಿಂದ ಬಳಲುವ ದನ, Read more…

ಕಳ್ಳ, ಭ್ರಷ್ಟ ಅಧಿಕಾರಿಗಳ ಬೇಟೆಗೆ ಲೋಕಾಯುಕ್ತ ತಂಡ ರೆಡಿ : ಅಹವಾಲು ಸ್ವೀಕಾರ

ಸೇಡಂ: ಭ್ರಷ್ಟ ಅಧಿಕಾರಿಗಳ ಬೇಟೆಗೆ ಲೋಕಾಯುಕ್ತ ಅಧಿಕಾರಿಗಳು ತಯ್ಯಾರಿ ಅಹವಾಲು ಸ್ವೀಕಾರಕ್ಕೆ ಮುಂದಾಗಿದ್ದು, ಸೇಡಂನ ತಹಸೀಲ್ದರ ಕಚೇರಿಯಲ್ಲಿ ಏಪ್ರೀಲ್ 6 ರಂದು ಅಹವಾಲು ಸ್ವೀಕಾರ ಕಾರ್ಯಕ್ರಮ ನಡೆಯಲಿದೆ. ಅಂದು ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 1.30ರ ವರೆಗೆ ಸೇಡಂನ ತಹಸೀಲ್ದಾರ ಕಚೇರಿ ಆವರಣದಲ್ಲಿ ಸಾರ್ವಜನಿಕರು ತಮ್ಮ ದೂರುಗಳನ್ನು ನೀಡಬಹುದಾಗಿದೆ. ಸರಕಾರಿ ಕಚೇರಿಗಳಲ್ಲಿ ಕೆಲಸ ವಿಳಂಬ ಮಾಡುತ್ತಿದ್ದರೆ, ಕಾರಣ ಇಲ್ಲದೆ ಅರ್ಜಿ ತಿರಸ್ಕರಿಸಿದರೆ ಅಥವಾ ಕಚೇರಿಗೆ ಅಲೆದಾಡಿಸುತ್ತಿದ್ದರೆ, ಕೆಲಸ ಮಾಡಿಕೊಡಲು ಲಂಚ Read more…

ಶಿವಶಂಕರೇಶ್ವರ ಮಹಾತ್ಮಾ ನಾಟಕ ಪ್ರದರ್ಶನ ಹಿನ್ನೆಲೆ ಕಥಾಪೂಜೆ

ಸೇಡಂ: ಶ್ರೀ ಕೊತ್ತಲ ಬಸವೇಶ್ವರ ಜಾತ್ರಾ ಮಹೋತ್ಸವ ಪ್ರಯುಕ್ತ ಮೇ. 10,11,12 ರಂದು ಪರಮ ಪೂಜ್ಯ ಶಿವಶಂಕರೇಶ್ವರರ ಮಹಾತ್ಮಾ ನಾಟಕ ಪ್ರದರ್ಶನ ಮಾಡಲಾಗುತ್ತಿದ್ದು, ಶನಿವಾರ ಕಥಾ ಪುಸ್ತಕ ಪೂಜೆ ನೆರವೇರಿಸಲಾಗಿದೆ. ಕೊತ್ತಲ ಬಸವೇಶ್ವರ ದೇವಾಲಯದಲ್ಲಿ ಪರಮ ಪೂಜ್ಯ ಶಿವಶಂಕರ ಶಿವಾಚಾರ್ಯರು, ಹಾಲಪ್ಪಯ್ಯ ವಿರಕ್ತ ಮಠದ ಪಂಚಾಕ್ಷರಿ ಮಹಾಸ್ವಾಮಿಗಳು ಹಾಗೂ ಶ್ರೀ ಕೊತ್ತಲ ಬಸವೇಶ್ವರ ಸಂಸ್ಥಾನದ ಸದಾಶಿವ ಮಹಾಸ್ವಾಮಿಗಳು ಕಥಾ ಪೂಜೆ ನೆರವೇರಿಸಿದ್ದಾರೆ.   ಶ್ರೀ ಮಡಿವಾಳೇಶ್ವರ ನವತರುಣ ನಾಟ್ಯ ಸಂಘದ Read more…