ಎರಡೇ ತಿಂಗಳಲ್ಲಿ ನಾಲ್ಕನೇ ಸಾವು : ಶ್ರೀಸಿಮೆಂಟ್ ನಲ್ಲಿ ನಿಲ್ಲದ ಮರಣ ಮೃದಂಗ

ಸೇಡಂ: ಕಳೆದೆರಡು ತಿಂಗಳಲ್ಲಿ ನಿರಂತರ ನಾಲ್ಕು ಜನ ಕಾರ್ಮಿಕರನ್ನು ತಾಲೂಕಿನ ಕೋಡ್ಲಾ ಬೆನಕನಹಳ್ಳಿಯ ಶ್ರೀಸಿಮೆಂಟ್ ಕಾರ್ಖಾನೆ ಬಲಿ ಪಡೆದಿದೆ.ಜಾರ್ಖಂಡ ಮೂಲದ ರಾಜಕುಮಾರ (26) ಎಂಬ ಕಾರ್ಮಿಕ ಶನಿವಾರ ರಾತ್ರಿ ಮೃತಪಟ್ಟಿದ್ದಾನೆ. ಸುರಕ್ಷತಾ ಲೋಪವೇ ಸಾವಿಗೆ ಕಾರಣ ಎನ್ನಲಾಗಿದ್ದು, ಬೃಹತ್ ಕಟ್ಟಡ ನಿರ್ಮಿಸುವಾಗ ಮೇಲಿಂದ ಬಿದ್ದ ಲೋಹದಿಂದ ಕಾರ್ಮಿಕ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ.ಕೆಲ‌ ದಿನಗಳ ಹಿಂದಷ್ಟೆ ಬೆನಕನಹಳ್ಳಿ ನಿವಾಸಿ ಇಂದ್ರಕುಮಾರ ಮೃತಪಟ್ಟಿದ್ದ. ಈಗ ಮತ್ತೋರ್ವನನ್ನು ಶ್ರೀಸಿಮೆಂಟ್ ಕಾರ್ಖಾನೆ ಬಲಿ ಪಡೆದಿದೆ. ಪ್ರಕರಣ ಕುರಿತು Read more…

ಶ್ರೀಸಿಮೆಂಟ್ ನಲ್ಲಿ ಮತ್ತೆ ಬಿತ್ತು ಹೆಣ : ನಿಲ್ಲದ ಕಾರ್ಮಿಕರ ಸಾವು

ಸೇಡಂ: ತಾಲೂಕಿನ ಕೋಡ್ಲಾ ಬೆನಕನಹಳ್ಳಿಯ ಶ್ರೀ ಸಿಮೆಂಟ್ ಕಾರ್ಖಾನೆಯಲ್ಲಿ ಮತ್ತೋರ್ವ ಕಾರ್ಮಿಕ ಸಾವನ್ನಪ್ಪಿದ್ದಾನೆ.ಬೆನಕನಹಳ್ಳಿ ಗ್ರಾಮದ ಇಂದ್ರಕುಮಾರ ದೇವಪ್ಪ (೩೨) ಮೃತ ವ್ಯಕ್ತಿಯಾಗಿದ್ದು, ಹೃದಯಾಘಾತದಿಂದ ಸಾವನ್ನಪ್ಪಿರುವುದಾಗಿ ಹೇಳಲಾಗಿದೆಯಾದರೂ, ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.ಕೇವಲ ಎರಡೇ ತಿಂಗಳಲ್ಲಿ ಇಬ್ಬರು ಕಾರ್ಮಿಕರು ಕಾರ್ಖಾನೆಯಲ್ಲಿ ಅಪಘಾತಕ್ಕೆ ಒಳಗಾಗಿ ಸಾವನ್ನಪ್ಪಿದ್ದರು. ಈಗ ಇಂದ್ರಕುಮಾರ ಮೃತಪಟ್ಟಿದ್ದು, ಯಾವ ಆಸ್ಪತ್ರೆಯ ವರದಿಗಳಿಲ್ಲದೆ ಸಿಮೆಂಟ್ ಕಾರ್ಖಾನೆಯ ಅಧಿಕಾರಿಗಳೇ ಹೃದಯಾಘಾತವಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ. ದಿನೆ ದಿನೆ ಕಾರ್ಖಾನೆಯಲ್ಲಿ ಸಾವು ನೋವುಗಳು ಉಲ್ಬಣಿಸುತ್ತಿದ್ದು, ಕಾರ್ಖಾನೆಯ Read more…

ಈ ವ್ಯಕ್ತಿ ಕಂಡರೆ ಕೂಡಲೆ ತಿಳಿಸಿ : ಕಾಣೆ ಯಾಗಿದ್ದಾರೆ.

ಸೇಡಂ: ತಾಲೂಕಿನ ಬಟಗೇರಾ (ಕೆ) ನಿವಾಸಿ ಸುನೀಲ ನಾಗಪ್ಪ ತಳವಾರ (30) ಕಾಣೆಯಾಗಿದ್ದಾರೆ ಎಂದು ಸೇಡಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೆಲ‌ ದಿನಗಳ ಹಿಂದೆ ಬೈಲಿಗೆ ಹೋಗಿ ಬರುವುದಾಗಿ ತಿಳಿಸಿದ ಸುನೀಲ ಮತ್ತೆ ಹಿಂದಿರುಗಿ ಬಂದಿರುವುದಿಲ್ಲ. ಸದೃಢ ಮೈಕಟ್ಟು, ಸಾದಾ ಬಣ್ಣ, ಬಿಳಿ ಹೂವಿನ ಚಿತ್ರ ಅಂಗಿ ಧರಿಸಿದ್ದಾರೆ. ಯಾರಿಗಾದರೂ ಮಾಹಿತಿ ದೊರೆತಲ್ಲಿ ಸೇಡಂ ಪೊಲೀಸ್ ಠಾಣೆ ಸಂಖ್ಯೆ 08441276166 ಅಥವಾ ಪಿಎಸ್ಐ ಸಂಖ್ಯೆ 9480803593 ಗೆ ಸಂಪರ್ಕಿಸಲು Read more…

ಕೈಲಾಗದವರು ಕಡೆಯ ಅಸ್ತ್ರವನ್ನು ಮಲ್ಲಿಕಾರ್ಜುನ ಮುತ್ಯಾ ಮೇಲೆ ಪ್ರಯೋಗಿಸುತ್ತಿದ್ದಾರೆಯೆ?

ಕೈಲಾಗದವರ ಕಡೆಯ ಅಸ್ತ್ರವೇ ಅಪಪ್ರಚಾರ. ಇಂತದ್ದೊಂದು ಮಾತು ಎಲ್ಲೆಡೆ ಜನಜನಿತವಾಗಿದೆ. ಇದೇ ರೀತಿಯಲ್ಲಿ ಭಕ್ತರ ಬಾಳನ್ನು ಬೆಳಗಿ, ಮಗ, ಅಣ್ಣನ ಸ್ಥಾನದಲ್ಲಿ ನಿಂತು ಜನರ ಕಷ್ಟಗಳನ್ನು ಆಲಿಸುತ್ತಿರುವ ಪವಾಡ ಪುರುಷ ಶಹಾಪೂರ ತಾಲೂಕಿನ ಮಹಲರೋಜಾದ ಮಲ್ಲಿಕಾರ್ಜುನ ಮುತ್ಯಾರವರ ಮೇಲೆ ಅನೇಕ ಕಾಣದ ಕೈಗಳು ಅಪಪ್ರಚಾರ ಎಸಗುತ್ತಿರುವುದು ತೀರಾ ದುಃಖದ ಸಂಗತಿ ಎನ್ನಬಹುದು. ತಮ್ಮಲ್ಲಿರುವ ಅಗಾಧವಾದ ಶಕ್ತಿಯನ್ನು ಕೇವಲ ಕೆಲವರಿಗಾಗಿ ಬಳಸದೆ, ಸಕಲ ಜೀವರಾಶಿಗಳ ಒಳಿತಿಗಾಗಿ ಬಳಸಿ ಭಕ್ತರ ಬಾಳಲ್ಲಿನ ಕಷ್ಟ Read more…

ರಂಗೋತ್ಸವದಲ್ಲಿ ಅಯೋಧ್ಯೆಯ ಬಾಲ ರಾಮ

ದೇಶದೆಲ್ಲೆಡೆ ಹೋಳಿ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಲಾಗಿದೆ. ಇದೇ ಮೊದಲ ಬಾರಿಗೆ ಅಂದರೆ ಪ್ರಾಣ ಪ್ರತಿಷ್ಠಾಪನೆಯ ನಂತರ ಅಯೋಧ್ಯಯಲ್ಲಿ ಶ್ರೀರಾಮನ ಜೊತೆ ಲಕ್ಷಾಂತರ ಭಕ್ತರು ಹೋಳಿ ಆಡಿ ಸಂಭ್ರಮಿಸಿದ್ದಾರೆ. ಬಾಲರಾಮನ ವಿಶೇಷ ದರ್ಶನವನ್ನು ಹೋಳಿ ದಿನ ಪಡೆದ ಸಹಸ್ರಾರು ಸಂಖ್ಯೆಯ ಭಕ್ತರು. ರಂಗು ರಂಗಿನ ಹಬ್ಬ ಸಂಭ್ರಮಿಸಿದ್ದಾರೆ. ಬಾಲರಾಮನ ಮೂರ್ತಿಗೆ ಬಣ್ಣ ಹಚ್ಚುವ ಮೂಲಕ ವಿಶೇಷವಾಗಿ ಹಬ್ಬವನ್ನು ಆಚರಿಸಿದ್ದಾರೆ.