ಕಲ್ಯಾಣ ಕರ್ನಾಟಕ ಪ್ರಶಸ್ತಿಗೆ ಬಣಗಾರ ಸೇರಿ ಮೂರು ಜನರ ಆಯ್ಕೆ

ಸೇಡಂ: ಸೇಡಂನ ಬೊಮ್ನಳ್ಳಿ ಸುದ್ದಿ ಪ್ರತಿಷ್ಠಾನ ವತಿಯಿಂದ 2024 ನೇ ಸಾಲಿನ ಕಲ್ಯಾಣ ಕರ್ನಾಟಕ ಪತ್ರಕರ್ತ ಪ್ರಶಸ್ತಿಗೆ ಇಬ್ಬರು ಪತ್ರಕರ್ತರಾದ ಸುಭಾಷ್ ಬಣಗಾರ, ಯಾದಗಿರಿಯ ನಾಗಪ್ಪ ಮಾಲಿಪಾಟೀಲ್  ಹಾಗೂ ಶಿವ ಸಂಪದ ಪ್ರಶಸ್ತಿಗೆ ಶಿಕ್ಷಣ ತಜ್ಞ ಪ್ರೊ. ಚೆನ್ನಾರೆಡ್ಡಿ ಪಾಟೀಲ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಮಹಿಪಾಲ್ ರೆಡ್ಡಿ ಮುನ್ನೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಸರಾಂತ ಪತ್ರಕರ್ತ ದಿ. ವೀರಭದ್ರ ಮಾಮನಿ ಸ್ಮರಣಾರ್ಥ ಇಬ್ಬರು ಪತ್ರಕರ್ತರಿಗೆ ಹಾಗೂ Read more…

ಶ್ರೀಸಿಮೆಂಟ್ ನಲ್ಲಿ ಮತ್ತೆ ಬಿತ್ತು ಹೆಣ : ನಿಲ್ಲದ ಕಾರ್ಮಿಕರ ಸಾವು

ಸೇಡಂ: ತಾಲೂಕಿನ ಕೋಡ್ಲಾ ಬೆನಕನಹಳ್ಳಿಯ ಶ್ರೀ ಸಿಮೆಂಟ್ ಕಾರ್ಖಾನೆಯಲ್ಲಿ ಮತ್ತೋರ್ವ ಕಾರ್ಮಿಕ ಸಾವನ್ನಪ್ಪಿದ್ದಾನೆ.ಬೆನಕನಹಳ್ಳಿ ಗ್ರಾಮದ ಇಂದ್ರಕುಮಾರ ದೇವಪ್ಪ (೩೨) ಮೃತ ವ್ಯಕ್ತಿಯಾಗಿದ್ದು, ಹೃದಯಾಘಾತದಿಂದ ಸಾವನ್ನಪ್ಪಿರುವುದಾಗಿ ಹೇಳಲಾಗಿದೆಯಾದರೂ, ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.ಕೇವಲ ಎರಡೇ ತಿಂಗಳಲ್ಲಿ ಇಬ್ಬರು ಕಾರ್ಮಿಕರು ಕಾರ್ಖಾನೆಯಲ್ಲಿ ಅಪಘಾತಕ್ಕೆ ಒಳಗಾಗಿ ಸಾವನ್ನಪ್ಪಿದ್ದರು. ಈಗ ಇಂದ್ರಕುಮಾರ ಮೃತಪಟ್ಟಿದ್ದು, ಯಾವ ಆಸ್ಪತ್ರೆಯ ವರದಿಗಳಿಲ್ಲದೆ ಸಿಮೆಂಟ್ ಕಾರ್ಖಾನೆಯ ಅಧಿಕಾರಿಗಳೇ ಹೃದಯಾಘಾತವಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ. ದಿನೆ ದಿನೆ ಕಾರ್ಖಾನೆಯಲ್ಲಿ ಸಾವು ನೋವುಗಳು ಉಲ್ಬಣಿಸುತ್ತಿದ್ದು, ಕಾರ್ಖಾನೆಯ Read more…

ಅಪರಿಚಿತ ವ್ಯಕ್ತಿಗೆ ವಾಹನ‌ ಡಿಕ್ಕಿ.. ಸ್ಥಳದಲ್ಲೇ ಸಾವು

ಸೇಡಂ: ಅಪರಿಚಿತ ವ್ಯಕ್ತಿಗೆ ಅಪರಿಚಿತ ವಾಹನ ಡಿಕ್ಕಿಯಾದ ಘಟನೆ ತಾಲೂಕಿನ ಹೂಡಾ ಕೆ ಬಳಿ‌ ಜರುಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅನಾಮಧೇಯ ವ್ಯಕ್ತಿ ಯಾರೆಂದು ಗುರುತು ಸಿಕ್ಕಿಲ್ಲ. ಅಪರಿಚಿತ ವಾಹನ ಡಿಕ್ಕಿಯಿಂದ ಸಾವು ಸಂಭವಿಸಿದೆ ಎನ್ನಲಾಗಿದೆ. ಮೃತನ ಕುರಿತು ಮಾಹಿತಿ ದೊರೆತಲ್ಲಿ ಪಿಎಸ್ಐ ಮಳಖೇಡ 9480803595 ಗೆ ಸಂಪರ್ಕಿಸಲು ಕೋರಲಾಗಿದೆ.

ಎಟಿಎಂನಿಂದ 9 ಲಕ್ಷ ಎಗರಿಸಿದ್ದ ಕಿಲಾಡಿ ಕಳ್ಳ ಅಂದರ್

ಕಲಬುರಗಿ: ಚಿಂಚೋಳಿ ತಾಲೂಕಿನ ಚಿಮ್ಮನಚೋಡ್ ಗ್ರಾಮದ ಇಂಡಿಯಾ ಒನ್ ಏಟಿಎಂನಿಂದ ಬರೋಬ್ಬರಿ 9,13,400 ರೂಗಳನ್ನು ಎಗರಿಸಿದ್ದ ತಂಡದ ಓರ್ವನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಚಿಮ್ಮನಚೋಡ್ ಗ್ರಾಮದಲ್ಲಿನ ಎಟಿಎಂನ್ನು ಗ್ಯಾಸ್ ಕಟ್ಟರನಿಂದ ಕಟ್ ಮಾಡಿ, 9 ಲಕ್ಷಕ್ಕೂ ಅಧಿಕ ಹಣವನ್ನು ಕಳ್ಳತನ ಮಾಡಲಾಗಿತ್ತು. ಮಾರ್ಚ 18 ರಂದು ನಡೆದ ಘಟನೆಯ ಬೆನ್ನು ಹತ್ತಿದ ಚಿಂಚೋಳಿ ಮತ್ತು ಕುಂಚಾವರಂ ಪೊಲೀಸರು ಆರೋಪಿಗಳ ಪೈಕಿ ಹರಿಯಾಣಾ ಮೂಲದ ಶೋಯೆಬ್ ರಶೀದಿ ಎಂಬಾತನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. Read more…

ಸೇಡಂಗೆ ಕಾಂಗ್ರೆಸ್ ಅಭ್ಯರ್ಥಿ  ರಾಧಾಕೃಷ್ಣ ದೊಡ್ಡಮನಿ ಆಗಮನ

ಸೇಡಂ: ಕಲಬುರಗಿ ಲೋಕಸಭೆ‌ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ ಅವರು ಇದೇ ಮಾ.30 ರಂದು ಸೇಡಂ ಪಟ್ಟಣಕ್ಕೆ  ಆಗಮಿಸಲಿದ್ದಾರೆ ಎಂದು ಸೇಡಂ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಶಿವಶರಣರೆಡ್ಡಿ ಪಾಟೀಲ ತಿಳಿಸಿದರು. ನಾಳೆ ಸಂಜೆ 4 ಗಂಟೆಗೆ ಚಿಂಚೋಳಿ ರಸ್ತೆಯಲ್ಲಿರುವ  ವೀರಶೈವ ಕಲ್ಯಾಣ ಮಂಟಪದಲ್ಲಿ ಸೇಡಂ ಹಾಗೂ ಮುಧೋಳ ಬ್ಲಾಕ್  ಕಾಂಗ್ರೆಸ್ ಸಮಿತಿಯ ವತಿಯಿಂದ ಲೋಕಸಭೆ ಚುನಾವಣೆ ಹಿನ್ನಲೆಯಲ್ಲಿ  ಕಾರ್ಯಕರ್ತರ ಸಭೆಯನ್ನು ಹಮ್ಮಿಕೊಳ್ಳಲಾಗಿದ್ದು,  ನೂತನ ಅಭ್ಯರ್ಥಿ ರಾಧಾಕೃಷ್ಣ ಅವರು Read more…

ಲೋಕಸಭೆಯ ಎಲ್ಲಾ ಕ್ಷೇತ್ರಗಳಲ್ಲೂ ಬಿಜೆಪಿ ಗೆಲುವು ಖಚಿತ : ಆರ್ ಅಶೋಕ

ಕಲಬುರಗಿ: ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದ 28 ಕ್ಷೇತ್ರಗಳಲ್ಲಿ ಬಿಜೆಪಿ ಭರ್ಜರಿ ಜಯ ಸಾಧಿಸಲಿದೆ ಎಂದು ವಿಪಕ್ಷ ನಾಯಕ ಆರ್. ಅಶೋಕ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಜಿಲ್ಲೆಯ ಚಿಂಚೋಳಯಲ್ಲಿ ಶಾಸಕ ಡಾ. ಅವಿನಾಶ ಜಾಧವ ನಿವಾಸದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿ ಬಿಜೆಪಿಯ ಮಹತ್ವದ ಬೆಂಬಲ ಜನರಿಂದ ದೊರೆಯುತ್ತಿದೆ. ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿ ಮಾಡುವ ಸಂಕಲ್ಪ ಜನ ಮಾಡಿದ್ದಾರೆ. ಖಚಿತವಾಗಿ ಎಲ್ಲಾ ಕ್ಷೇತ್ರಗಳಲ್ಲೂ ಬಿಜೆಪಿ ಗೆಲುವು ಸಾಧಿಸಲಿದೆ ಎಂದಿದ್ದಾರೆ. ಇದೇ Read more…

35 ಲಕ್ಷ ಮೌಲ್ಯದ ಪಾನ್ ಮಸಾಲಾ ಜಪ್ತಿ ಮಾಡಿದ ಪೊಲೀಸರು

ಕಲಬುರಗಿ: ತುಮಕೂರಿನಿಂದ ಬೀದರಗೆ ಸಾಗಿಸಲಾಗುತ್ತಿದ್ದ 35 ಲಕ್ಷ ಮೌಲ್ಯದ ಪಾನ ಮಸಾಲಾವನ್ನು ಜಪ್ತಿ ಮಾಡಲಾಗಿದೆ ಎಂದು ಎಸ್ಪಿ ಅಕ್ಷಯ ಹಾಕೆ ತಿಳಿಸಿದ್ದಾರೆ. ಚಿಗರಳ್ಳಿ ಚೆಕಪೋಸ್ಟ್ ಬಳಿ ದಾಳಿ ನಡೆಸಿದ ಗ್ರಾಮೀಣ ಎಎಸ್ಪಿ ಬಿಂದುಮಣಿ ಅವರ ನೇತೃತ್ವದ ತಂಡ 35 ಲಕ್ಷಕ್ಕೂ ಅಧಿಕ ಬೆಲೆ ಬಾಳುವ ಪಾನ ಮಸಾಲಾವನ್ನು ವಶಪಡಿಸಿಕೊಂಡು, ಹೆಚ್ಚಿನ ತನಿಖೆಗಾಗಿ ತೆರಿಗೆ ಇಲಾಖೆಗೆ ಹಸ್ತಾಂತರಿಸಲಾಗಿದೆ ಎಂದು ತಿಳಿಸಿದ್ದಾರೆ.

ಕಲಬುರಗಿ ಲೋಕಸಭಾ ಕಣದಲ್ಲಿರುವ ಕಾಂಗ್ರೇಸ್ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ (ಆರ್ ಕೆ) ಯಾರು? ಏನವರ ಇತಿಹಾಸ?

ಕಲಬುರಗಿ: ರಾಧಾಕೃಷ್ಣ ದೊಡ್ಡಮನಿ ಎಂದರೆ ಬಹುತೇಕರಿಗೆ ಗೊತ್ತು ಅವರು ಎಐಸಿಸಿ ಅಧ್ಯಕ್ಷ ಡಾ. ಮಲ್ಲಿಕಾರ್ಜುನ ಖರ್ಗೆ ಅವರ ಅಳಿಯ ಎಂಬುದು. ಅವರು ಕಲಬುರ್ಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಗುಂಡಗುರ್ತಿ ಗ್ರಾಮದಲ್ಲಿ 1960 ರ ಸೆಪ್ಟೆಂಬರ್ 16 ರಂದು ರಾಜೇಂದ್ರಪ್ಪ ದೊಡ್ಡಮನಿ, ಶಿವಮ್ಮ ದಂಪತಿಗಳಿಗೆ ಜನಿಸಿದರು. ಕೃಷಿಕರ ಕುಟುಂಬದಿಂದ ಬಂದವರು ಮತ್ತು ಅವರ ತಂದೆ ರಾಜೇಂದ್ರಪ್ಪ ಅವರು 1960 ರ ದಶಕದಲ್ಲಿ ಎರಡು ಅವಧಿಯ ತಾಲೂಕಾ ಅಭಿವೃದ್ಧಿ ಮಂಡಳಿಯ ಸದಸ್ಯರಾಗಿದ್ದರು. ರಾಧಾಕೃಷ್ಣ Read more…