ಮೂರು ಅರ್ಜಿ ಕೊಟ್ಟರೂ ಮಹಿಳೆಯರಿಗೆ ಶೌಚಾಲಯವಿಲ್ಲ

ಸೇಡಂ: ಮೂರು ಬಾರಿ ಪುರಸಭೆಗೆ ಅರ್ಜಿ ಕೊಟ್ಟರೂ ಸಹ ಮಹಿಳೆಯರಿಗೆ ಶೌಚಾಲಯ ಕಲ್ಪಿಸದ ಪುರಸಭೆ ವಿರುದ್ಧ ನಮ್ಮ ಕರ್ನಾಟಕ ಸೇನೆ ಪ್ರತಿಭಟಿಸಿದೆ‌ ಪಟ್ಟಣದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದ ಕಾರ್ಯಕರ್ತರು ಪುರಸಭೆ ನಿಷ್ಕಾಳಜಿಗೆ ಛೀಮಾರಿ ಹಾಕಿದ್ದಾರೆ. ಅಲ್ಲದೆ ಪುರಸಭೆ ಅಧಿಕಾರಿಗಳಿಗೆ ಮನವಿ ಪತ್ರವನ್ನೂ ಸಹ ಸಲ್ಲಿಸಿದ್ದಾರೆ. ಪಟ್ಟಣದ ಬಸವ ನಗರ ಬಡಾವಣೆಯಲ್ಲಿ 40 ವರ್ಷಗಳಿಂದ ಮಹಿಳೆಯರಿಗೆ ಸೂಕ್ತ ಶೌಚಾಲಯದ ವ್ಯವಸ್ಥೆ ಇಲ್ಲ. ಬಯಲನ್ನೇ ಮಹಿಳೆಯರು ಅವಲಂಭಿಸಿದ್ದು, ಇಡೀ ಆಡಳಿತ ವ್ಯವಸ್ಥೆಯೇ ನಾಚಿಕೆ Read more…

ರಂಗೋತ್ಸವದಲ್ಲಿ ಅಯೋಧ್ಯೆಯ ಬಾಲ ರಾಮ

ದೇಶದೆಲ್ಲೆಡೆ ಹೋಳಿ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಲಾಗಿದೆ. ಇದೇ ಮೊದಲ ಬಾರಿಗೆ ಅಂದರೆ ಪ್ರಾಣ ಪ್ರತಿಷ್ಠಾಪನೆಯ ನಂತರ ಅಯೋಧ್ಯಯಲ್ಲಿ ಶ್ರೀರಾಮನ ಜೊತೆ ಲಕ್ಷಾಂತರ ಭಕ್ತರು ಹೋಳಿ ಆಡಿ ಸಂಭ್ರಮಿಸಿದ್ದಾರೆ. ಬಾಲರಾಮನ ವಿಶೇಷ ದರ್ಶನವನ್ನು ಹೋಳಿ ದಿನ ಪಡೆದ ಸಹಸ್ರಾರು ಸಂಖ್ಯೆಯ ಭಕ್ತರು. ರಂಗು ರಂಗಿನ ಹಬ್ಬ ಸಂಭ್ರಮಿಸಿದ್ದಾರೆ. ಬಾಲರಾಮನ ಮೂರ್ತಿಗೆ ಬಣ್ಣ ಹಚ್ಚುವ ಮೂಲಕ ವಿಶೇಷವಾಗಿ ಹಬ್ಬವನ್ನು ಆಚರಿಸಿದ್ದಾರೆ.

ಲೋಕಸಭೆಯ ಎಲ್ಲಾ ಕ್ಷೇತ್ರಗಳಲ್ಲೂ ಬಿಜೆಪಿ ಗೆಲುವು ಖಚಿತ : ಆರ್ ಅಶೋಕ

ಕಲಬುರಗಿ: ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದ 28 ಕ್ಷೇತ್ರಗಳಲ್ಲಿ ಬಿಜೆಪಿ ಭರ್ಜರಿ ಜಯ ಸಾಧಿಸಲಿದೆ ಎಂದು ವಿಪಕ್ಷ ನಾಯಕ ಆರ್. ಅಶೋಕ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಜಿಲ್ಲೆಯ ಚಿಂಚೋಳಯಲ್ಲಿ ಶಾಸಕ ಡಾ. ಅವಿನಾಶ ಜಾಧವ ನಿವಾಸದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿ ಬಿಜೆಪಿಯ ಮಹತ್ವದ ಬೆಂಬಲ ಜನರಿಂದ ದೊರೆಯುತ್ತಿದೆ. ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿ ಮಾಡುವ ಸಂಕಲ್ಪ ಜನ ಮಾಡಿದ್ದಾರೆ. ಖಚಿತವಾಗಿ ಎಲ್ಲಾ ಕ್ಷೇತ್ರಗಳಲ್ಲೂ ಬಿಜೆಪಿ ಗೆಲುವು ಸಾಧಿಸಲಿದೆ ಎಂದಿದ್ದಾರೆ. ಇದೇ Read more…

ಶ್ರೀರಾಮೋತ್ಸವಕ್ಕೆ ಅದ್ಧೂರಿ ತಯ್ಯಾರಿ : ಪೂಜ್ಯರ ಸಮ್ಮುಖದಲ್ಲಿ ಚಾಲನೆ

ಸೇಡಂ: ಏಪ್ರೀಲ್ ತಿಂಗಳಲ್ಲಿ ಆಯೋಜಿಸಲು ನಿರ್ಧರಿಸಲಾಗಿರುವ ಅದ್ಧೂರಿ ಅಯೋಧ್ಯಾಪತಿ ಶ್ರೀರಾಮೋತ್ಸವದ ಪೂರ್ವ ತಯ್ಯಾರಿ ಚಟುವಟಿಕೆಗಳಿಗೆ ಚಾಲನೆ ನೀಡಲಾಗಿದೆ. ಪಟ್ಟಣದ ಚೌರಸ್ತಾ ಬಳಿ ಶ್ರೀರಾಮನ ಬ್ಯಾನರ್ ಅನಾವರಣ ಹಾಗೂ ಕಾರ್ಯಚಟುವಟಿಕೆಗಳಿಗೆ ಶ್ರೀ ಶಿವಶಂಕರೇಶ್ವರ ಮಠದ ಶಿವಶಂಕರ ಶಿವಾಚಾರ್ಯರು, ಶ್ರೀ ಕೊತ್ತಲ ಬಸವೇಶ್ವರ ಸಂಸ್ಥಾನದ ಸದಾಶಿವ ಮಹಾಸ್ವಾಮಿಗಳು ಹಾಗೂ ಶ್ರೀ ಹಾಲಪ್ಪಯ್ಯ ವಿರಕ್ತ ಮಠದ ಪಂಚಾಕ್ಷರಿ ಮಹಾಸ್ವಾಮಿಗಳು ಚಾಲನೆ ನೀಡಿದ್ದಾರೆ. ಇದೇ ವೇಳೆ ಮಾತನಾಡಿದ ಪೂಜ್ಯರು ಏಪ್ರೀಲ್ 20 ರಂದು ಶ್ರೀರಾಮೋತ್ಸವ ಆಚರಿಸಲು Read more…

ಹೋಳಿ ಹೆಸರಲ್ಲಿ ಮನಸೊ ಇಚ್ಚೆ ಬಣ್ಣ ಎಸೆದರೆ ಹುಷಾರ್

ಸೇಡಂ: ಹೋಳಿ ಹಬ್ಬದ ಹೆಸರಲ್ಲಿ ವಿನಾಕಾರಣ ರಸ್ತೆ ಮೇಲೆ ತೆರಳುವವರಿಗೆ ಬಣ್ಣ ಎರಚದಿರಿ ಎಂದು ಸಿಪಿಐ ಮಂಜುನಾಥ ಸೂಚಿಸಿದ್ದಾರೆ.ಪಟ್ಡಣದ ಸರಕಾರಿ ನೌಕರರ ಭವನದಲ್ಲಿ ಹೋಳಿ ಹಬ್ಬ ಹಿನ್ನೆಲೆಯಲ್ಲಿ ಹಮ್ಮಿಕೊಂಡ ಶಾಂತಿ ಸಭೆಯಲ್ಲಿ ಅವರು ಮಾತನಾಡಿದ್ದು,ಹಬ್ಬದ ದಿನದಂದು ರಸ್ತೆ ಮೇಲೆ ತೆರಳುವಂತಹ ಜನರಿಗೆ ಒತ್ತಾಯ ಪೂರ್ವಕವಾಗಿ ಬಣ್ಣ ಹಚ್ಚುವುದು ಮಾಡಿದರೆ ಅಥವಾ ಕಾನೂನು ಸುವ್ಯವಸ್ಥೆಗೆ ಧಕ್ಕೆ ತಂದರೆ ಅಥವಾ ಕುಡಿದು ಗಲಾಟೆಯಂತಹ ಕೆಲಸದಲ್ಲಿ ತೊಡಗಿದರೆ ಅಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು Read more…

35 ಲಕ್ಷ ಮೌಲ್ಯದ ಪಾನ್ ಮಸಾಲಾ ಜಪ್ತಿ ಮಾಡಿದ ಪೊಲೀಸರು

ಕಲಬುರಗಿ: ತುಮಕೂರಿನಿಂದ ಬೀದರಗೆ ಸಾಗಿಸಲಾಗುತ್ತಿದ್ದ 35 ಲಕ್ಷ ಮೌಲ್ಯದ ಪಾನ ಮಸಾಲಾವನ್ನು ಜಪ್ತಿ ಮಾಡಲಾಗಿದೆ ಎಂದು ಎಸ್ಪಿ ಅಕ್ಷಯ ಹಾಕೆ ತಿಳಿಸಿದ್ದಾರೆ. ಚಿಗರಳ್ಳಿ ಚೆಕಪೋಸ್ಟ್ ಬಳಿ ದಾಳಿ ನಡೆಸಿದ ಗ್ರಾಮೀಣ ಎಎಸ್ಪಿ ಬಿಂದುಮಣಿ ಅವರ ನೇತೃತ್ವದ ತಂಡ 35 ಲಕ್ಷಕ್ಕೂ ಅಧಿಕ ಬೆಲೆ ಬಾಳುವ ಪಾನ ಮಸಾಲಾವನ್ನು ವಶಪಡಿಸಿಕೊಂಡು, ಹೆಚ್ಚಿನ ತನಿಖೆಗಾಗಿ ತೆರಿಗೆ ಇಲಾಖೆಗೆ ಹಸ್ತಾಂತರಿಸಲಾಗಿದೆ ಎಂದು ತಿಳಿಸಿದ್ದಾರೆ.

ಕಲಬುರಗಿ ಲೋಕಸಭಾ ಕಣದಲ್ಲಿರುವ ಕಾಂಗ್ರೇಸ್ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ (ಆರ್ ಕೆ) ಯಾರು? ಏನವರ ಇತಿಹಾಸ?

ಕಲಬುರಗಿ: ರಾಧಾಕೃಷ್ಣ ದೊಡ್ಡಮನಿ ಎಂದರೆ ಬಹುತೇಕರಿಗೆ ಗೊತ್ತು ಅವರು ಎಐಸಿಸಿ ಅಧ್ಯಕ್ಷ ಡಾ. ಮಲ್ಲಿಕಾರ್ಜುನ ಖರ್ಗೆ ಅವರ ಅಳಿಯ ಎಂಬುದು. ಅವರು ಕಲಬುರ್ಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಗುಂಡಗುರ್ತಿ ಗ್ರಾಮದಲ್ಲಿ 1960 ರ ಸೆಪ್ಟೆಂಬರ್ 16 ರಂದು ರಾಜೇಂದ್ರಪ್ಪ ದೊಡ್ಡಮನಿ, ಶಿವಮ್ಮ ದಂಪತಿಗಳಿಗೆ ಜನಿಸಿದರು. ಕೃಷಿಕರ ಕುಟುಂಬದಿಂದ ಬಂದವರು ಮತ್ತು ಅವರ ತಂದೆ ರಾಜೇಂದ್ರಪ್ಪ ಅವರು 1960 ರ ದಶಕದಲ್ಲಿ ಎರಡು ಅವಧಿಯ ತಾಲೂಕಾ ಅಭಿವೃದ್ಧಿ ಮಂಡಳಿಯ ಸದಸ್ಯರಾಗಿದ್ದರು. ರಾಧಾಕೃಷ್ಣ Read more…

ತಿರುಪತಿಯ ಪೂರ್ವದ್ವಾರ ಮೋತಕಪಲ್ಲಿಯ ಶ್ರೀ ಬಲಭೀಮಸೇನ ದೇವಾಲಯ

 ಈ ದೇವಾಲಯಕ್ಕಿದೆ 1200 ವರ್ಷಗಳ ಇತಿಹಾಸ.  ಈ ದೇವನಿಗೆ ಭಕ್ತಿಯಿಂದ ನಮಿಸಿದರೆ ಸರ್ವ ದುಃಖ ಪರಿಹಾರವಾಗಿ, ಸುಖ ಶಾಂತಿ ಜೀವನದಲ್ಲಿ ನೆಲೆಸುತ್ತದೆ. ತೆಲಂಗಾಣ, ಮಹಾರಾಷ್ಟ್ರ, ಕರ್ನಾಟಕ ಹೀಗೆ ನಾನಾ ರಾಜ್ಯಗಳ ಭಕ್ತರಿಗೆ ಈತನೇ ಆರಾಧ್ಯದೈವ.  ದೇವಾಲಯಕ್ಕೆ ತಿರುಪತಿಯ ತಿಮ್ಮಪ್ಪನ ಮಹಾದ್ವಾರವೆಂದು ಕರೆಯಲಾಗುತ್ತದೆ. ಸ್ವಯಂ ಉದ್ಭವ ಮೂರ್ತಿಯಾಗಿ ಭಕ್ತರ ಇಷ್ಟಾರ್ಥ ನೆರವೇರಿಸುತ್ತಿರುವ  ಈ ಮಹಾಬಲನಿಗೆ ತಿರುಪತಿಯ ತಿಮ್ಮಪ್ಪನಿಗೆ ಸಲ್ಲುವ ಎಲ್ಲಾ ಸೇವೆಗಳು ಯಥಾವತ್ತಾಗಿ ಸಲ್ಲುತ್ತವೆ. ಇಷ್ಟಕ್ಕೂ ಈ ಬಲಭೀಮಸೇನ ನೆಲೆಸಿರುವುದು ಎಲ್ಲಿ Read more…

ಘನವೈರಾಗಿ, ಪರಮತ್ಯಾಗಿ ಮುಗಳಖೋಡದ ಯಲ್ಲಾಲಿಂಗ ಮಹಾರಾಜರು

ಇಂದಿಗೆ ೧೩೮ ವರ್ಷಗಳ ಹಿಂದೆ ಶರಣರ ನಾಡು ವಿಜಯಪುರದ ಇಂಡಿ ತಾಲೂಕಿನ ಮಿರಗಿ ಎಂಬ ಪುಟ್ಟ ಗ್ರಾಮದಲ್ಲಿ ಶಿವಪ್ಪ ಕಾಶಿಬಾಯಿ ಎಂಬ ಪುಣ್ಯ ದಂಪತಿಗಳ ಮಗನಾಗಿ ಜನಿಸಿ ಬಂದ ಮಗುವೇ ಯಲ್ಲಪ್ಪ ಎಂಟು ವರ್ಷದ ಪ್ರಾಯದಲ್ಲೇ ಶಿವ ಧ್ಯಾನ ನಿರತನಾಗಿ  ಕುರಿ ಕಾಯುವ ಕಾಯಕ ಮಾಡುತ್ತಿದ್ದರು, ಇಪ್ಪತ್ತು ವರ್ಷ ತುಂಬುವಷ್ಟರಲ್ಲಿ ಗರಡಿ ಮನೆಯಲ್ಲಿ ಪಳಗಿ ಕುಸ್ತಿ ಪಟುವಾಗಿದ್ದ ಯಲ್ಲಪ್ಪ, ಮನೆಯವರ ಬಲವಂತಕ್ಕೆ ಒಲ್ಲದ ಮನಸ್ಸಿನಿಂದಲೇ ಹೊನ್ನಮ್ಮ ಎಂಬುವರ ಜೊತೆಗೆ ವೈವಾಹಿಕ Read more…