ಎರಡೇ ತಿಂಗಳಲ್ಲಿ ನಾಲ್ಕನೇ ಸಾವು : ಶ್ರೀಸಿಮೆಂಟ್ ನಲ್ಲಿ ನಿಲ್ಲದ ಮರಣ ಮೃದಂಗ

ಸೇಡಂ: ಕಳೆದೆರಡು ತಿಂಗಳಲ್ಲಿ ನಿರಂತರ ನಾಲ್ಕು ಜನ ಕಾರ್ಮಿಕರನ್ನು ತಾಲೂಕಿನ ಕೋಡ್ಲಾ ಬೆನಕನಹಳ್ಳಿಯ ಶ್ರೀಸಿಮೆಂಟ್ ಕಾರ್ಖಾನೆ ಬಲಿ ಪಡೆದಿದೆ.ಜಾರ್ಖಂಡ ಮೂಲದ ರಾಜಕುಮಾರ (26) ಎಂಬ ಕಾರ್ಮಿಕ ಶನಿವಾರ ರಾತ್ರಿ ಮೃತಪಟ್ಟಿದ್ದಾನೆ. ಸುರಕ್ಷತಾ ಲೋಪವೇ ಸಾವಿಗೆ ಕಾರಣ ಎನ್ನಲಾಗಿದ್ದು, ಬೃಹತ್ ಕಟ್ಟಡ ನಿರ್ಮಿಸುವಾಗ ಮೇಲಿಂದ ಬಿದ್ದ ಲೋಹದಿಂದ ಕಾರ್ಮಿಕ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ.ಕೆಲ‌ ದಿನಗಳ ಹಿಂದಷ್ಟೆ ಬೆನಕನಹಳ್ಳಿ ನಿವಾಸಿ ಇಂದ್ರಕುಮಾರ ಮೃತಪಟ್ಟಿದ್ದ. ಈಗ ಮತ್ತೋರ್ವನನ್ನು ಶ್ರೀಸಿಮೆಂಟ್ ಕಾರ್ಖಾನೆ ಬಲಿ ಪಡೆದಿದೆ. ಪ್ರಕರಣ ಕುರಿತು Read more…

ಕಲ್ಯಾಣ ಕರ್ನಾಟಕ ಪ್ರಶಸ್ತಿಗೆ ಬಣಗಾರ ಸೇರಿ ಮೂರು ಜನರ ಆಯ್ಕೆ

ಸೇಡಂ: ಸೇಡಂನ ಬೊಮ್ನಳ್ಳಿ ಸುದ್ದಿ ಪ್ರತಿಷ್ಠಾನ ವತಿಯಿಂದ 2024 ನೇ ಸಾಲಿನ ಕಲ್ಯಾಣ ಕರ್ನಾಟಕ ಪತ್ರಕರ್ತ ಪ್ರಶಸ್ತಿಗೆ ಇಬ್ಬರು ಪತ್ರಕರ್ತರಾದ ಸುಭಾಷ್ ಬಣಗಾರ, ಯಾದಗಿರಿಯ ನಾಗಪ್ಪ ಮಾಲಿಪಾಟೀಲ್  ಹಾಗೂ ಶಿವ ಸಂಪದ ಪ್ರಶಸ್ತಿಗೆ ಶಿಕ್ಷಣ ತಜ್ಞ ಪ್ರೊ. ಚೆನ್ನಾರೆಡ್ಡಿ ಪಾಟೀಲ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಮಹಿಪಾಲ್ ರೆಡ್ಡಿ ಮುನ್ನೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಸರಾಂತ ಪತ್ರಕರ್ತ ದಿ. ವೀರಭದ್ರ ಮಾಮನಿ ಸ್ಮರಣಾರ್ಥ ಇಬ್ಬರು ಪತ್ರಕರ್ತರಿಗೆ ಹಾಗೂ Read more…

ಕಡೆಗೂ ಪೊಲೀಸ್ ಠಾಣೆಗೆ ಕೂಡಿಬಂತು ಕಾಲ

ಎಸಿ ಕಚೇರಿಗೆ ಠಾಣೆ ಸ್ಥಳಾಂತರ : ಹಲವು ವರ್ಷಗಳ ಮಳೆನೀರ ತೊಂದರೆಗೆ ಮುಕ್ತಿ ಸೇಡಂ: ಪ್ರತಿ ಮಳೆಗಾಲದಲ್ಲಿ ಮೊಳಕಾಲೆತ್ತರಕ್ಕೆ ನೀರು. ಸಾವಿರಾರು ಜನರ ಮೇಲಿನ ಎಫ್.ಐ.ಆರ್, ದೂರುಗಳು ನೀರಿನಲ್ಲಿ ಹೋಮ ಮಾಡಿದಂತಹ ಅನುಭವ. ಅವುಗಳನ್ನು ಹೇಗೊ ಕಾಪಾಡಿ, ಒಣಗಿಸಿ ಶೇಖರಿಸುವ ಪೊಲೀಸ್ ಸಿಬ್ಬಂದಿ. ಇನ್ನೊಂದೆಡೆ ಸಾರ್ವಜನಿಕರಿಗೆ ರಕ್ಷಣ ನೀಡುವವರೆ ನೀರಲ್ಲಿ ಮುಳುಗುವ ದಯನೀಯ ಸ್ಥಿತಿ.ಸುಮಾರು ೩೦ಕ್ಕೂ ಅಧಿಕ ವರ್ಷಗಳಿಂದ ಇಂತಹ ದುಸ್ಥಿತಿಯಲ್ಲಿದ್ದ ಸೇಡಂ ಪೊಲೀಸ್ ಠಾಣೆಗೆ ಕೊನೆಗೂ ಮುಕ್ತಿ ಸಿಕ್ಕಿದೆ. Read more…

ಶ್ರೀಸಿಮೆಂಟ್ ನಲ್ಲಿ ಮತ್ತೆ ಬಿತ್ತು ಹೆಣ : ನಿಲ್ಲದ ಕಾರ್ಮಿಕರ ಸಾವು

ಸೇಡಂ: ತಾಲೂಕಿನ ಕೋಡ್ಲಾ ಬೆನಕನಹಳ್ಳಿಯ ಶ್ರೀ ಸಿಮೆಂಟ್ ಕಾರ್ಖಾನೆಯಲ್ಲಿ ಮತ್ತೋರ್ವ ಕಾರ್ಮಿಕ ಸಾವನ್ನಪ್ಪಿದ್ದಾನೆ.ಬೆನಕನಹಳ್ಳಿ ಗ್ರಾಮದ ಇಂದ್ರಕುಮಾರ ದೇವಪ್ಪ (೩೨) ಮೃತ ವ್ಯಕ್ತಿಯಾಗಿದ್ದು, ಹೃದಯಾಘಾತದಿಂದ ಸಾವನ್ನಪ್ಪಿರುವುದಾಗಿ ಹೇಳಲಾಗಿದೆಯಾದರೂ, ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.ಕೇವಲ ಎರಡೇ ತಿಂಗಳಲ್ಲಿ ಇಬ್ಬರು ಕಾರ್ಮಿಕರು ಕಾರ್ಖಾನೆಯಲ್ಲಿ ಅಪಘಾತಕ್ಕೆ ಒಳಗಾಗಿ ಸಾವನ್ನಪ್ಪಿದ್ದರು. ಈಗ ಇಂದ್ರಕುಮಾರ ಮೃತಪಟ್ಟಿದ್ದು, ಯಾವ ಆಸ್ಪತ್ರೆಯ ವರದಿಗಳಿಲ್ಲದೆ ಸಿಮೆಂಟ್ ಕಾರ್ಖಾನೆಯ ಅಧಿಕಾರಿಗಳೇ ಹೃದಯಾಘಾತವಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ. ದಿನೆ ದಿನೆ ಕಾರ್ಖಾನೆಯಲ್ಲಿ ಸಾವು ನೋವುಗಳು ಉಲ್ಬಣಿಸುತ್ತಿದ್ದು, ಕಾರ್ಖಾನೆಯ Read more…

ಶ್ರೀಸಿಮೆಂಟನಲ್ಲಿ ಹೈಡ್ರಾಗೆ ಸಿಲುಕಿ ಕಾರ್ಮಿಕ ಸಾವು

ಸೇಡಂ: ಚಲಿಸುತ್ತಿದ್ದ ಹೈಡ್ರಾ ವಾಹನಕ್ಕೆ ಸಿಲುಕಿ ಕಾರ್ಮಿಕನೋರ್ವ ಸಾವನ್ನಪ್ಪಿರುವ ಘಟನೆ ತಾಲೂಕಿನ ಕೋಡ್ಲಾ ಬೆನಕನಹಳ್ಳಿಯ ಶ್ರೀಸಿಮೆಂಟ್ ಕಾರ್ಖಾನೆಯಲ್ಲಿ ಜರುಗಿದೆ. ಹೈಡ್ರಾ ವಾಹನ ಡಿಕ್ಕಿ ರಭಸಕ್ಕೆ ಕಾರ್ಮಿಕನ ದೇಹ ಛಿದ್ರವಾಗಿದ್ದು, ಮೃತನನ್ನು ವೆಸ್ಟ್ ಬೆಂಗಾಲ ಮೂಲದ‌ ಶೇಖ್ (42) ಎಂದು ಗುರುತಿಸಲಾಗಿದೆ. ಘಟನೆ ಹಿನ್ನೆಲೆಯಲ್ಲಿ ಶ್ರೀಸಿಮೆಂಟ್ ಕಾರ್ಖಾನೆ ಎದುರು ಕಾರ್ಮಿಕರು ಜಮಾಯಿಸಿದ್ದು, ಸೇಡಂ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.

Retired ಆದರೂ ಸೇವೆ ಮರೆಯದ ಎಎಸ್ಐ

ಸರಕಾರಿ ಕೆಲಸ, ದೇವರ ಕೆಲಸ ಅಂತ ಭಾವಿಸುವ ದಿನಗಳು ಈಗ ತೀರಾ ದೂರ.‌ ಸರಕಾರಿ ಕೆಲಸ ಅಂದರೆ ಈಗ ರೊಕ್ಕ ಹೊಡೆವ ಧೊ‌-ನಂಬರ್ ಸೇವೆ ಎನ್ನಬಹುದು. ಪ್ರಾಮಾಣಿಕತೆಯಿಂದ ಜನರ ಸೇವೆ ಮಾಡುವ ಮನಸ್ಸುಗಳು ತೀರಾ‌ ವಿರಳವಾಗಿವೆ. ಅದರಲ್ಲೂ ಪೊಲೀಸ್ ಇಲಾಖೆ ರಾಜಕಾರಣಿಗಳ PA ಗಳಂತಾಗಿ ಇಲಾಖೆಗೆ ಇದ್ದ ಗೌರವ ಮಣ್ಣು ಪಾಲು ಮಾಡಿರೋದ್ರಲ್ಲಿ ಯಾವ ಸಂಶಯವೂ ಇಲ್ಲ. ಸಮಾಜದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವುದು ದೂರದ ಮಾತು ಜನರು ಅನುಭವಿಸುವ ಸಣ್ಣ Read more…

ಅಪರಿಚಿತ ವ್ಯಕ್ತಿಗೆ ವಾಹನ‌ ಡಿಕ್ಕಿ.. ಸ್ಥಳದಲ್ಲೇ ಸಾವು

ಸೇಡಂ: ಅಪರಿಚಿತ ವ್ಯಕ್ತಿಗೆ ಅಪರಿಚಿತ ವಾಹನ ಡಿಕ್ಕಿಯಾದ ಘಟನೆ ತಾಲೂಕಿನ ಹೂಡಾ ಕೆ ಬಳಿ‌ ಜರುಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅನಾಮಧೇಯ ವ್ಯಕ್ತಿ ಯಾರೆಂದು ಗುರುತು ಸಿಕ್ಕಿಲ್ಲ. ಅಪರಿಚಿತ ವಾಹನ ಡಿಕ್ಕಿಯಿಂದ ಸಾವು ಸಂಭವಿಸಿದೆ ಎನ್ನಲಾಗಿದೆ. ಮೃತನ ಕುರಿತು ಮಾಹಿತಿ ದೊರೆತಲ್ಲಿ ಪಿಎಸ್ಐ ಮಳಖೇಡ 9480803595 ಗೆ ಸಂಪರ್ಕಿಸಲು ಕೋರಲಾಗಿದೆ.

“ಬೋಧಿಸಿದವರು, ಭೋಧಿಸಿದಂತೆ ಪರಿವರ್ತನೆ ತಂದವರು”

ತನ್ನಂತೆ ಪರರ ಬಗೆದೊಡೆ ಕೈಲಾಸ ಬಿನ್ನಾಣವಿಕ್ಕು ಸರ್ವಜ್ಞ. ತನಗೆ ಯಾವುದರಿಂದ ನೋವಾಗುತ್ತದೆ ಅದರಿಂದ ಬೇರೆಯವರಿಗೂ ಸಹ ಅದೇ ರೀತಿಯ ನೋವಾಗುತ್ತದೆಯೆಂದು ತಿಳಿದು ಪರರನ್ನು ನೋಯಿಸದೆ, ಪರರನ್ನು ಸಹ ತನ್ನಂತೆ ತಿಳಿದರೆ ಅಂತಹವರು ಅತಿ ಶ್ರೇಷ್ಠ ಕೈಲಾಸ ವಾಸಕ್ಕೆ ಯೋಗ್ಯರು. ಆದರೆ “ಮೇಲು ಕೀಳೆಂಬ” ಆಚರಣೆಗಳನ್ನು ಶತ ಶತಮಾನಗಳಿಂದ ಪಾರಂಪರಿಕವಾಗಿ ರೂಢಿಸಿಕೊಂಡು ಬಂದ ಜನರು, ತನ್ನಂತೆ ಪರರು ಎನ್ನುವ ಧರ್ಮದ ಹಾಗೂ ಧಾರ್ಮಿಕ ಯತಿಗಳ ಮಾತಿನ ಕುರಿತು ಚಿಂತಿಸಲಿಲ್ಲ, ಯೋಚಿಸಲಿಲ್ಲ, ಆ Read more…

ಈ ವ್ಯಕ್ತಿ ಕಂಡರೆ ಕೂಡಲೆ ತಿಳಿಸಿ : ಕಾಣೆ ಯಾಗಿದ್ದಾರೆ.

ಸೇಡಂ: ತಾಲೂಕಿನ ಬಟಗೇರಾ (ಕೆ) ನಿವಾಸಿ ಸುನೀಲ ನಾಗಪ್ಪ ತಳವಾರ (30) ಕಾಣೆಯಾಗಿದ್ದಾರೆ ಎಂದು ಸೇಡಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೆಲ‌ ದಿನಗಳ ಹಿಂದೆ ಬೈಲಿಗೆ ಹೋಗಿ ಬರುವುದಾಗಿ ತಿಳಿಸಿದ ಸುನೀಲ ಮತ್ತೆ ಹಿಂದಿರುಗಿ ಬಂದಿರುವುದಿಲ್ಲ. ಸದೃಢ ಮೈಕಟ್ಟು, ಸಾದಾ ಬಣ್ಣ, ಬಿಳಿ ಹೂವಿನ ಚಿತ್ರ ಅಂಗಿ ಧರಿಸಿದ್ದಾರೆ. ಯಾರಿಗಾದರೂ ಮಾಹಿತಿ ದೊರೆತಲ್ಲಿ ಸೇಡಂ ಪೊಲೀಸ್ ಠಾಣೆ ಸಂಖ್ಯೆ 08441276166 ಅಥವಾ ಪಿಎಸ್ಐ ಸಂಖ್ಯೆ 9480803593 ಗೆ ಸಂಪರ್ಕಿಸಲು Read more…