ಕಲಬುರಗಿ: ತುಮಕೂರಿನಿಂದ ಬೀದರಗೆ ಸಾಗಿಸಲಾಗುತ್ತಿದ್ದ 35 ಲಕ್ಷ ಮೌಲ್ಯದ ಪಾನ ಮಸಾಲಾವನ್ನು ಜಪ್ತಿ ಮಾಡಲಾಗಿದೆ ಎಂದು ಎಸ್ಪಿ ಅಕ್ಷಯ ಹಾಕೆ ತಿಳಿಸಿದ್ದಾರೆ.
ಚಿಗರಳ್ಳಿ ಚೆಕಪೋಸ್ಟ್ ಬಳಿ ದಾಳಿ ನಡೆಸಿದ ಗ್ರಾಮೀಣ ಎಎಸ್ಪಿ ಬಿಂದುಮಣಿ ಅವರ ನೇತೃತ್ವದ ತಂಡ 35 ಲಕ್ಷಕ್ಕೂ ಅಧಿಕ ಬೆಲೆ ಬಾಳುವ ಪಾನ ಮಸಾಲಾವನ್ನು ವಶಪಡಿಸಿಕೊಂಡು, ಹೆಚ್ಚಿನ ತನಿಖೆಗಾಗಿ ತೆರಿಗೆ ಇಲಾಖೆಗೆ ಹಸ್ತಾಂತರಿಸಲಾಗಿದೆ ಎಂದು ತಿಳಿಸಿದ್ದಾರೆ.
0 Comments