ಸೇಡಂ: ಕಳೆದೆರಡು ತಿಂಗಳಲ್ಲಿ ನಿರಂತರ ನಾಲ್ಕು ಜನ ಕಾರ್ಮಿಕರನ್ನು ತಾಲೂಕಿನ ಕೋಡ್ಲಾ ಬೆನಕನಹಳ್ಳಿಯ ಶ್ರೀಸಿಮೆಂಟ್ ಕಾರ್ಖಾನೆ ಬಲಿ ಪಡೆದಿದೆ.
ಜಾರ್ಖಂಡ ಮೂಲದ ರಾಜಕುಮಾರ (26) ಎಂಬ ಕಾರ್ಮಿಕ ಶನಿವಾರ ರಾತ್ರಿ ಮೃತಪಟ್ಟಿದ್ದಾನೆ. ಸುರಕ್ಷತಾ ಲೋಪವೇ ಸಾವಿಗೆ ಕಾರಣ ಎನ್ನಲಾಗಿದ್ದು, ಬೃಹತ್ ಕಟ್ಟಡ ನಿರ್ಮಿಸುವಾಗ ಮೇಲಿಂದ ಬಿದ್ದ ಲೋಹದಿಂದ ಕಾರ್ಮಿಕ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ.
ಕೆಲ ದಿನಗಳ ಹಿಂದಷ್ಟೆ ಬೆನಕನಹಳ್ಳಿ ನಿವಾಸಿ ಇಂದ್ರಕುಮಾರ ಮೃತಪಟ್ಟಿದ್ದ. ಈಗ ಮತ್ತೋರ್ವನನ್ನು ಶ್ರೀಸಿಮೆಂಟ್ ಕಾರ್ಖಾನೆ ಬಲಿ ಪಡೆದಿದೆ.
ಪ್ರಕರಣ ಕುರಿತು ಬೇಜವಾಬ್ದಾರಿ ಮತ್ತು ಸುರಕ್ಷತಾ ಕ್ರಮ ಕೈಗೊಳ್ಳದ ಪರಿಣಾಮ ಸೇಡಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 Comments