ಸೇಡಂ: ಸೇಡಂನ ಬೊಮ್ನಳ್ಳಿ ಸುದ್ದಿ ಪ್ರತಿಷ್ಠಾನ ವತಿಯಿಂದ 2024 ನೇ ಸಾಲಿನ ಕಲ್ಯಾಣ ಕರ್ನಾಟಕ ಪತ್ರಕರ್ತ ಪ್ರಶಸ್ತಿಗೆ ಇಬ್ಬರು ಪತ್ರಕರ್ತರಾದ ಸುಭಾಷ್ ಬಣಗಾರ, ಯಾದಗಿರಿಯ ನಾಗಪ್ಪ ಮಾಲಿಪಾಟೀಲ್  ಹಾಗೂ ಶಿವ ಸಂಪದ ಪ್ರಶಸ್ತಿಗೆ ಶಿಕ್ಷಣ ತಜ್ಞ ಪ್ರೊ. ಚೆನ್ನಾರೆಡ್ಡಿ ಪಾಟೀಲ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಮಹಿಪಾಲ್ ರೆಡ್ಡಿ ಮುನ್ನೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹೆಸರಾಂತ ಪತ್ರಕರ್ತ ದಿ. ವೀರಭದ್ರ ಮಾಮನಿ ಸ್ಮರಣಾರ್ಥ ಇಬ್ಬರು ಪತ್ರಕರ್ತರಿಗೆ ಹಾಗೂ ಶಿಕ್ಷಣ ತಜ್ಞ ಶಿವಯ್ಯ ಮಠಪತಿ ಸ್ಮರಣಾರ್ಥ ಒಬ್ಬರು ಶಿಕ್ಷಣ ತಜ್ಞರಿಗೆ ಪ್ರಶಸ್ತಿ ನೀಡಲಾಗುತ್ತಿದ್ದು, ಸೇಡಂ ಪಟ್ಟಣದ ಶ್ರೀ ಕೊತ್ತಲ ಬಸವೇಶ್ವರ ದೇವಾಲಯ ಪ್ರಾಂಗಣದಲ್ಲಿ ಜುಲೈ 23 ರಂದು ಬೆಳಿಗ್ಗೆ 10.30 ಕ್ಕೆ ಕಾರ್ಯಕ್ರಮ ಆಯೋಜಿಸಲಾಗಿದೆ.

ಬೊಮ್ನಳ್ಳಿ ಸುದ್ದಿ ಸಂಪಾದಕ ನಾಗಯ್ಯ ಸ್ವಾಮಿ ಸ್ಥಾಪಿಸಿದ್ದ ಪ್ರತಿಷ್ಠಾನದ ಮೂಲಕ ಕಳೆದ 12 ವರ್ಷಗಳಿಂದ ಕಾರ್ಯಕ್ರಮ ಮಾಡಲಾಗುತ್ತಿದ್ದು, ನಾಡಿನ ಹೆಸರಾಂತ ಪತ್ರಕರ್ತರಿಗೆ ಪ್ರತಿ ವರ್ಷ ಪತ್ರಿಕಾ ದಿನಾಚರಣೆ ನಿಮಿತ್ಯ ಪ್ರಶಸ್ತಿ ಪ್ರದಾನ ನೀಡಲಾಗಿದೆ ಎಂದು ಮಹಿಪಾಲರೆಡ್ಡಿ ಮುನ್ನೂರ ತಿಳಿಸಿದ್ದಾರೆ.

Share here

0 Comments

Leave a Reply

Avatar placeholder

Your email address will not be published. Required fields are marked *