ಸರಕಾರಿ ಕೆಲಸ, ದೇವರ ಕೆಲಸ ಅಂತ ಭಾವಿಸುವ ದಿನಗಳು ಈಗ ತೀರಾ ದೂರ. ಸರಕಾರಿ ಕೆಲಸ ಅಂದರೆ ಈಗ ರೊಕ್ಕ ಹೊಡೆವ ಧೊ-ನಂಬರ್ ಸೇವೆ ಎನ್ನಬಹುದು.
ಪ್ರಾಮಾಣಿಕತೆಯಿಂದ ಜನರ ಸೇವೆ ಮಾಡುವ ಮನಸ್ಸುಗಳು ತೀರಾ ವಿರಳವಾಗಿವೆ. ಅದರಲ್ಲೂ ಪೊಲೀಸ್ ಇಲಾಖೆ ರಾಜಕಾರಣಿಗಳ PA ಗಳಂತಾಗಿ ಇಲಾಖೆಗೆ ಇದ್ದ ಗೌರವ ಮಣ್ಣು ಪಾಲು ಮಾಡಿರೋದ್ರಲ್ಲಿ ಯಾವ ಸಂಶಯವೂ ಇಲ್ಲ. ಸಮಾಜದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವುದು ದೂರದ ಮಾತು ಜನರು ಅನುಭವಿಸುವ ಸಣ್ಣ ಪುಟ್ಟ ಸಮಸ್ಯೆಗಳಿಗೂ ಸಹ ಸ್ಪಂಧಿಸುವ ಗೋಜಿಗೆ ಈಗಿನ ಪೊಲೀಸರು ಹೋಗದೆ ಇರುವುದು ದುರ್ದೈವವೇ ಸರಿ. ತಾವಾಯ್ತು ತಮ್ಮ ಡ್ಯೂಟಿ ಆಯ್ತು. ಮಿಕ್ಕಿದ್ದೆಲ್ಲ ನಮಗ್ಯಾಕೆ ಅನ್ನೊ ಸಾವಿರಾರು ಪೊಲೀಸರ ಮಧ್ಯೆ ಇಲ್ಲೊಬ್ಬ ಎಎಸ್ಐ retired ಆದ ನಂತರವೂ without order ಕೆಲಸ ಮಾಡುತ್ತಿದ್ದಾರೆ.
Retired ಆದ ಮೇಲೆ ಯಾಕ್ ಕೆಲಸ ಮಾಡ್ತಾರೆ? ಎಂಬ ಪ್ರಶ್ನೆ ಮೂಡಿದರೂ ಇದು ಸತ್ಯ. ಅನೇಕರು duty ವೇಳೆಯಲ್ಲೂ ಸಹ ತಮ್ಮೆದುರೆ Trible riding, ಜಗಳ, Rash driving, ಬೇಕಾಬಿಟ್ಟಿ ವಾಹನ ನಿಲ್ಲಿಸುತ್ತಿರುವುದು ಕಂಡರೂ ಸಹ ಪೊಲೀಸರು ಕುಂಇ್ ಪಿಟುಕ್ ಅನ್ನಲ್ಲ. ಆದರೆ ಈ ಎಎಸ್ಐ ಇಂದಿನ ಪೊಲೀಸ್ ಇಲಾಖೆಗೆ ಮಾದರಿ ಎನ್ನಿಸುತ್ತಾರೆ.
ಸೇಡಂನಲ್ಲಿ ಕೊತ್ತಲ ಬಸವೇಶ್ವರ ಜಾತ್ರೆ ನಡೆಯಿತ್ತಿದೆ. ಜಾತ್ರೆ ಅಂದರೆ ಸಾಮಾನ್ಯವಾಗಿ ಲಕ್ಷಾಂತರ ಜನ ಪಾಲ್ಗೊಳ್ಳುವುದು ಸಾಮಾನ್ಯ. ಜೊತೆಗೆ ಅವರವರ vehicle ಗಳೂ ಜಮೆಯಾಗುವುದು ಹೊಸದೇನಲ್ಲ. ಆದರೆ ಅವುಗಳನ್ನು ನಿಯಂತ್ರಿಸುವ ಕೆಲಸ ಪೊಲೀಸ್ ಇಲಾಖೆ ಮಾಡಬೇಕು. ವಾಹನಗಳ ದಟ್ಟಣೆ, ಸುಗಮ ಸಂಚಾರಕ್ಕಾಗಿ ಅಣಿಯಾಗಬೇಕು. ಆದರೆ ಇದಾವುದು ಸೇಡಂನಲ್ಲಿ ನಡೆಯುತ್ತಿಲ್ಲ. ಬದಲಿಗೆ ರಾಜಕಾರಣಿಗಳ ಬೆನ್ನುಬಿದ್ದು ಪೊಲೀಸರು ಒದ್ದಾಡುತ್ತಿದ್ದಾರೆ.
ಸೂರ್ಯಕಾಂತ ಪೊಲೀಸ್ (ಸೂರ್ಯಕಾಂತ ಬೆಡಸೂರ) ಇವರು retired ಆಗಿ ಅನೇಕ ವರ್ಷಗಳೇ ಕಳೆದರೂ ಸಹ ಇಂದಿಗೂ ತಮ್ಮ ಸೇವಾಕಾರ್ಯ ಮರೆತಿಲ್ಲ. ಸೇವೆಯಲ್ಲಿದ್ದಾಗಲೂ ಸಹ ಸೂರ್ಯಕಾಂತ ಪೊಲೀಸ್ ಎಂದರೆ ಬೇಕಾಬಿಟ್ಟಿ ವಾಹನ ನಡೆಸುವವರು, ಇಸ್ಪೀಟ್ ಆಡುವವರು, ಕಳ್ಳರಲ್ಲಿ ನಡುಕ ಹುಟ್ಟುತ್ತಿತ್ತು. ಅಷ್ಟರ ಮಟ್ಟಿಗೆ ಗಟ್ಟಿತನ ಅವರಲ್ಲಿತ್ತು. ಮೂರ್ನಾಲ್ಕು ಜನ ಪೊಲೀಸರು ಮಾಡುವ ಕೆಲಸ ಅವರೊಬ್ಬರೆ ಮಾಡಿ ಮುಗಿಸುತ್ತಿದ್ದರು. ಕೆಲಸದಲ್ಲೂ ಸಹ ಸಾರ್ಥಕತೆ ಹುಡುಕಿದ ಕೀರ್ತಿ ಅವರಿಗೆ ಸಲ್ಲುತ್ತದೆ, ಏಕೆಂದರೆ ತಮ್ಮ ಕರ್ತವ್ಯ ಅವಧಿ ಮುಗಿದ ನಂತರವೂ duty ಮಾಡಿದ ಖ್ಯಾತಿ ಅವರಿಗಿದೆ.
ಈಗ ಕೊತ್ತಲ ಬಸವೇಶ್ವರ ಜಾತ್ರೆಯ ಪ್ರಯುಕ್ತ ತೀರಾ traffic jam ಆಗುತ್ತಿದೆ. ಕರ್ತವ್ಯ ನಿರತ ಯಾವ ಪೊಲೀಸರು ವಾಹನ ದಟ್ಟಣೆ ತಡೆವಲ್ಲಿ ಉತ್ಸುಕರಾಗಿಲ್ಲ. ಆದರೆ ಈ retired ಸೂರ್ಯಕಾತ ಪೊಲೀಸ್ ಬಿಸಿಲನ್ನೂ ಲೆಕ್ಕಿಸದೆ ವಾಹನ ಸಂಚಾರಕ್ಕೆ ಅನುವು ಮಾಡಿಕೊಡುತ್ತಿದ್ದಾರೆ. ಇದು ನನ್ನೂರು, ನನ್ನ ಜನ, ಅವರ ಸೇವೆಯೇ ಪುಣ್ಯ ಎಂದು ಭಾವಿಸಿ ಸೇವೆ ಮಾಡುತ್ತಿದ್ದಾರೆ. ನಿಮಗೊಂದು ಸಲ್ಯೂಟ್ ಸರ್
0 Comments