ಸೇಡಂ: ಅನೇಕರು ಜನುಮ ದಿನಗಳನ್ನು ಡಿಜೆ, ಮೌಂಸ, ಎಣ್ಣೆ ಪಾರ್ಟಿ ಮೂಲಕ ಆಚರಿಸುತ್ತಾರೆ, ಇನ್ನೂ ಕೆಲವರು ಕೇಕ್ ಕಟ್ ಮಾಡಿ, ಅನ್ನದಾನ, ಕಂಬಳಿ ದಾನ, ಬಟ್ಟೆ ದಾನ ಮಾಡಿ ಆಚರಿಸಿಕೊಳ್ಳುತ್ತಾರೆ. ಆದರೆ ಇಲ್ಲಿನ ಕನ್ನಡಪರ ಹೋರಾಟಗಾರ ವರದಸ್ವಾಮಿ ಹಿರೇಮಠ ಅವರು ಅತ್ಯಂತ ದುಬಾರಿ ಗಿಫ್ಟ್ ನ್ನು ಮಠಗಳಿಗೆ ನೀಡುವ ಮೂಲಕ ಆಚರಿಸಿಕೊಂಡಿದ್ದಾರೆ.
ಬಹುಶಃ ವಿಶ್ವದಲ್ಲಿ ದಾಹ ತಣಿಸುವ ಶಕ್ತಿ ಯಾವ ಹಣಕ್ಕೂ ಇಲ್ಲ ಎನ್ನಬಹುದು. ಬಾಯಾರಿಕೆಯಿಂದ ಬಳಲುವ ದನ, ಕರು, ಪಕ್ಷಿಗಳಿಗೆ ನೀರುಣಿಸುವ ಮಹತ್ಕಾರ್ಯಕ್ಕಿಂತಲೂ ದೊಡ್ಡ ಕಾರ್ಯ ಮತ್ತೊಂದಿಲ್ಲ ಮತ್ತು ಅದಕ್ಕೆ ಬೆಲೆ ಕಟ್ಟಲಾಗಲ್ಲ ಎನ್ನಬಹುದು. ಜಯ ಕರ್ನಾಟಕ ಜನಪರ ವೇದಿಕೆ ಜಿಲ್ಲಾ ಉಪಾಧ್ಯಕ್ಷ ವರದಸ್ವಾಮಿ ಹಿರೇಮಠ ಇಂತದ್ದೊಂದು ಸೇವೆ ಕಲ್ಪಿಸಿದ್ದಾರೆ. ತಮ್ಮ ಜನುಮ ದಿನದ ಪ್ರಯುಕ್ತ ಪಟ್ಟಣದ ಹಾಲಪ್ಪಯ್ಯ ವಿರಕ್ತ ಮಠ, ಗುಂಡೇಪಲ್ಲಿಯ ಶಿವಸಿದ್ಧಸೊಮೇಶ್ವರ ಸಂಸ್ಥಾನ ಹಿರೇಮಠ ಸೇರಿದಂತೆ ಅನೇಕ ಕಡೆಗಳಲ್ಲಿ ಕುಡಿಯುವ ನೀರಿನ ತೊಟ್ಟಿಗಳನ್ನು ದಾನವಾಗಿ ನೀಡಿ, ಮಾನವೀಯತೆ ಮೆರೆದಿದ್ದಾರೆ.
ಬಿರು ಬೇಸಿಗೆಯಲ್ಲಿ ಮನುಷ್ಯರಿಗೆ ನೀರಿನ ಸೌಕರ್ಯವಿದೆ ಆದರೆ ಪಶು ಪಕ್ಷಿಗಳಿಗೆ ತೀರಾ ಕಡಿಮೆ. ಅದಕ್ಕಾಗಿ ತೊಟ್ಟಿಗಳನ್ನು ದಾನ ಮಾಡಿರುವುದಾಗಿ ಅವರು ತಿಳಿಸಿದ್ದಾರೆ.
0 Comments