ಸೇಡಂ: ಶ್ರೀ ಕೊತ್ತಲ ಬಸವೇಶ್ವರ ಜಾತ್ರಾ ಮಹೋತ್ಸವ ಪ್ರಯುಕ್ತ ಮೇ. 10,11,12 ರಂದು ಪರಮ ಪೂಜ್ಯ ಶಿವಶಂಕರೇಶ್ವರರ ಮಹಾತ್ಮಾ ನಾಟಕ ಪ್ರದರ್ಶನ ಮಾಡಲಾಗುತ್ತಿದ್ದು, ಶನಿವಾರ ಕಥಾ ಪುಸ್ತಕ ಪೂಜೆ ನೆರವೇರಿಸಲಾಗಿದೆ.
ಕೊತ್ತಲ ಬಸವೇಶ್ವರ ದೇವಾಲಯದಲ್ಲಿ ಪರಮ ಪೂಜ್ಯ ಶಿವಶಂಕರ ಶಿವಾಚಾರ್ಯರು, ಹಾಲಪ್ಪಯ್ಯ ವಿರಕ್ತ ಮಠದ ಪಂಚಾಕ್ಷರಿ ಮಹಾಸ್ವಾಮಿಗಳು ಹಾಗೂ ಶ್ರೀ ಕೊತ್ತಲ ಬಸವೇಶ್ವರ ಸಂಸ್ಥಾನದ ಸದಾಶಿವ ಮಹಾಸ್ವಾಮಿಗಳು ಕಥಾ ಪೂಜೆ ನೆರವೇರಿಸಿದ್ದಾರೆ.
ಶ್ರೀ ಮಡಿವಾಳೇಶ್ವರ ನವತರುಣ ನಾಟ್ಯ ಸಂಘದ ನೇತೃತ್ವದಲ್ಲಿ ಸತತ ಮೂರು ದಿನಗಳ ಕಾಲ ನಡೆಯುವ ಆಧ್ಯಾತ್ಮಿಕ ನಾಟಕ ಇದಾಗಿದ್ದು, ಈ ನೆಲಕ್ಕೆ ಪೂಜ್ಯ ಶಿವಶಂಕರೇಶ್ವರ ಶಿವಾಚಾರ್ಯರು ನೀಡಿದ ಅನನ್ಯ ಧಾರ್ಮಿಕ ಸಂಪತ್ತಿನ ಹೂರಣ ಈ ನಾಟಕವಾಗಿರಲಿದೆ.
ಈ ವೇಳೆ ಹಿರಿಯ ರಂಗ ಕಲಾವಿದರಾದ ಶಿವಯ್ಯಸ್ವಾಮಿ ಬಿಬ್ಬಳ್ಳಿ, ಕಸಾಪ ಮಾಜಿ ಜಿಲ್ಲಾಧ್ಯಕ್ಷ ಮಹಿಪಾಲರೆಡ್ಡಿ ಮುನ್ನೂರು, ಕೆರಳ್ಳಿ ಗುರುನಾಥರೆಡ್ಡಿ ಪ್ರತಿಷ್ಠಾನದ ಅಧ್ಯಕ್ಷ ಸಿದ್ದಪ್ಪ ತಳ್ಳಳ್ಳಿ, ಕಲಬುರಗಿ ರಂಗಾಯಣ ಮಾಜಿ ನಿರ್ದೇಶಕ ಪ್ರಭಾಕರ ಜೋಶಿ, ವೀರಯ್ಯಸ್ವಾಮಿ ಮೂಲಿಮನಿ, ರಮೇಶ ಮಾಲಪಾಣಿ, ಅಶೋಕ ಪವಾರ, ಸಿದ್ದಣ್ಣ ಶೆಟ್ಟಿ, ವಿರೇಶ ಹೂಗಾರ, ಬಸವರಾಜ ಕೋಸಗಿ, ಶೇಖರ ಬಿಬ್ಬಳ್ಳಿ, ಬುಗ್ಗಪ್ಪ ಮಾಸ್ತರ್ ಇತರರು ಇದ್ದರು.
0 Comments