ಕಲಬುರಗಿ: ಚಿಂಚೋಳಿ ತಾಲೂಕಿನ ಚಿಮ್ಮನಚೋಡ್ ಗ್ರಾಮದ ಇಂಡಿಯಾ ಒನ್ ಏಟಿಎಂನಿಂದ ಬರೋಬ್ಬರಿ 9,13,400 ರೂಗಳನ್ನು ಎಗರಿಸಿದ್ದ ತಂಡದ ಓರ್ವನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಚಿಮ್ಮನಚೋಡ್ ಗ್ರಾಮದಲ್ಲಿನ ಎಟಿಎಂನ್ನು ಗ್ಯಾಸ್ ಕಟ್ಟರನಿಂದ ಕಟ್ ಮಾಡಿ, 9 ಲಕ್ಷಕ್ಕೂ ಅಧಿಕ ಹಣವನ್ನು ಕಳ್ಳತನ ಮಾಡಲಾಗಿತ್ತು. ಮಾರ್ಚ 18 ರಂದು ನಡೆದ ಘಟನೆಯ ಬೆನ್ನು ಹತ್ತಿದ ಚಿಂಚೋಳಿ ಮತ್ತು ಕುಂಚಾವರಂ ಪೊಲೀಸರು ಆರೋಪಿಗಳ ಪೈಕಿ ಹರಿಯಾಣಾ ಮೂಲದ ಶೋಯೆಬ್ ರಶೀದಿ ಎಂಬಾತನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈತನಿಂದ 3,75,400 ನಗದು ಮತ್ತು ಕೃತ್ಯಕ್ಕೆ ಬಳಸಿದ ಹ್ಯೂಂಡೈ ವರ್ನಾ ಕಾರನ್ನು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಒಪ್ಪಿಸಲಾಗಿದೆ. ಇನ್ನುಳಿದವರ ಪತ್ತೆಗಾಗಿ ಜಾಲ ಬೀಸಲಾಗಿದೆ ಎಂದು ಎಸ್ಪಿ ಅಕ್ಷಯ ಹಾಕೆ ತಿಳಿಸಿದ್ದಾರೆ.
0 Comments