ಕಲಬುರಗಿ: ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದ 28 ಕ್ಷೇತ್ರಗಳಲ್ಲಿ ಬಿಜೆಪಿ ಭರ್ಜರಿ ಜಯ ಸಾಧಿಸಲಿದೆ ಎಂದು ವಿಪಕ್ಷ ನಾಯಕ ಆರ್. ಅಶೋಕ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಯ ಚಿಂಚೋಳಯಲ್ಲಿ ಶಾಸಕ ಡಾ. ಅವಿನಾಶ ಜಾಧವ ನಿವಾಸದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿ ಬಿಜೆಪಿಯ ಮಹತ್ವದ ಬೆಂಬಲ ಜನರಿಂದ ದೊರೆಯುತ್ತಿದೆ. ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿ ಮಾಡುವ ಸಂಕಲ್ಪ ಜನ ಮಾಡಿದ್ದಾರೆ. ಖಚಿತವಾಗಿ ಎಲ್ಲಾ ಕ್ಷೇತ್ರಗಳಲ್ಲೂ ಬಿಜೆಪಿ ಗೆಲುವು ಸಾಧಿಸಲಿದೆ ಎಂದಿದ್ದಾರೆ.
ಇದೇ ವೇಳೆ ಕಾಂಗ್ರೇಸ್ ಸರಕಾರದ ನಡೆಯನ್ನು ಟೀಕಿಸಿದ ಅವರು, ಮೋದಿಯವರ ಸಾಧನೆಯ ಎದುರು ಕಾಂಗ್ರೇಸ್ ಸಾಧನೆ ಶೂನ್ಯಕ್ಕೆ ಸಮ. ಕಾಂಗ್ರೇಸ್ ಸರಕಾರ ಅಧಿಕಾರಕ್ಕೆ ಬಂದಾಗಿನಿಂದ ರಾಜ್ಯದಲ್ಲಿ ಬರಗಾಲ ತಲೆದೂರಿದೆ ಎಂದು ಹೇಳಿದ್ದಾರೆ.
ಈ ವೇಳೆ ಬೀದರ್ ಲೋಕಸಭಾ ಅಭ್ಯರ್ಥಿ ಸಂಸದರು ಭಗವಂತ ಖೂಬಾ, ಶಾಸಕರಾದ ಅವಿನಾಶ್ ಜಾಧವ ಇನ್ನಿತರರು ಇದ್ದರು.
0 Comments